ಇಂದಿನ(14-ಏಪ್ರಿಲ್-2020) ರಾಶಿ ಭವಿಷ್ಯ..

ಕನ್ನಡದ ಕಂಪು ಹರಡಿ..

ಮೇಷ ರಾಶಿ : ಹಣಕಾಸಿನ ವಿಷಯದಲ್ಲಿ ಕೆಲವು ಹೊಂದಾಣಿಕೆಗಳು ಅಗತ್ಯವಾಗಬಹುದು. ಪ್ರಯಾಣ ಕ್ಷೇತ್ರದಲ್ಲಿ ಇರುವವರು ವ್ಯವಹಾರವನ್ನು ಸುಧಾರಿಸಬಹುದು. ಜೀವನಶೈಲಿಯನ್ನು ಉತ್ತಮವಾಗಿಟ್ಟುಕೊಳ್ಳಲು ಕೆಲವರು ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳುವ ಸಾಧ್ಯತೆಯಿದೆ. ಪಟ್ಟಣದಲ್ಲಿಲ್ಲದ ನಿಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ನೀವು ಸಂಪರ್ಕದಲ್ಲಿರಲು ಸಾಧ್ಯವಿದೆ. ಪ್ರೀತಿಯಲ್ಲಿರುವವರು ಒಟ್ಟಿಗೆ ವಿಹಾರವನ್ನು ಯೋಜಿಸಲು ಬಯಸಬಹುದು ಆದರೆ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. ಶೈಕ್ಷಣಿಕ ವಿಷಯದಲ್ಲಿ ಉನ್ನತಿಯನ್ನು ಸಾಧಿಸುವುದು ಸಾಧ್ಯ. ಅದೃಷ್ಟ ಸಂಖ್ಯೆ: 6, ಅದೃಷ್ಟ ಬಣ್ಣ: ವೈಡೂರ್ಯ

ವೃಷಭ ರಾಶಿ : ನ್ಯಾಯಯುತ ಖರ್ಚು ನಿಮಗೆ ಲಾಭದಾಯಕವಾಗಿ ಪರಿಣಮಿಸುತ್ತದೆ. ಪ್ರದರ್ಶನ ವ್ಯವಹಾರದಲ್ಲಿರುವವರು ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ. ಮಾನಸಿಕ ಉದ್ವಿಗ್ನತೆಯನ್ನು ಎದುರಿಸಲು ಧ್ಯಾನವು ಉತ್ತಮ ಪರಿಹಾರವೆಂದು ತೋರಬರುತ್ತದೆ. ಕುಟುಂಬದಲ್ಲಿ ಪ್ರಕ್ಷುಬ್ಧತೆಯನ್ನು ಅನುಭವಿಸುವವರಿಗೆ ಸಂಗಾತಿಯೊಂದಿಗಿನ ಸಂಬಂಧವು ಇಂದು ಕೂಡ ಮುಂದುವರೆಯಲಿದೆ. ವಿದೇಶ ಪ್ರವಾಸ ಮಾಡಲು ಯೋಜಿಸುವವರು ಕೆಲವು ಹೆಚ್ಚುವರಿ ದಾಖಲೆಗಳನ್ನು ತಯಾರಿ ಮಾಡಬೇಕಾಗಬಹುದು. ಆನ್‌ಲೈನ್‌ನಲ್ಲಿ ಅಪರಿಚಿತರನ್ನು ಭೇಟಿ ಮಾಡುವಾಗ ಜಾಗರೂಕರಾಗಿರಿ. ಅದೃಷ್ಟ ಸಂಖ್ಯೆ: 2, ಅದೃಷ್ಟ ಬಣ್ಣ: ನಿಂಬೆ

ಮಿಥುನ ರಾಶಿ : ಉತ್ತಮ ಗಳಿಕೆ ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಧೀರ್ಘಾವಧಿ ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ಪಡೆಯುವಿರಿ. ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಸಣ್ಣ ಕಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಸಂಗಾತಿಯ ಬಗ್ಗೆ ನಿಮ್ಮ ಪ್ರೀತಿ ಮತ್ತು ಮೆಚ್ಚುಗೆ ಕುಟುಂಬವನ್ನ ಸ್ವರ್ಗವನ್ನಾಗಿ ಮಾಡುವ ಸಾಧ್ಯತೆಯಿದೆ. ನಿಮ್ಮಲ್ಲಿ ಕೆಲವರು ಭೂಮಿ ಅಥವಾ ಅಪಾರ್ಟ್ಮೆಂಟ್ ರೂಪದಲ್ಲಿ ಆಸ್ತಿಯನ್ನು ಖರೀದಿಸಲು ಯೋಜಿಸುವ ಸಾಧ್ಯತೆಯಿದೆ. ಅದೃಷ್ಟ ಸಂಖ್ಯೆ: 3, ಅದೃಷ್ಟ ಬಣ್ಣ: ಗುಲಾಬಿ

ಕಟಕ ರಾಶಿ : ನೀವು ಪ್ರೀತಿಸುವವರಿಗೆ ಹಣವನ್ನು ಉಡುಗೊರೆಯಾಗಿ ನೀಡುವಿರಿ. ಉದ್ಯೋಗ ಅರಸುವವರು ಯಶಸ್ವಿಯಾಗಲು ತಮ್ಮ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ನಿಮ್ಮ ವ್ಯಾಯಾಮದ ಹೊಸ ಉಪಕ್ರಮವು ನಿಮಗೆ ಸಹಾಯ ಮಾಡಲಿದೆ. ಇಂದು ಇನ್ನೊಬ್ಬರ ಸಾಧನೆಯಿಂದ ಮನೆಯಲ್ಲಿ ಸಂಭ್ರಮಾಚರಣೆಯ ವಾತಾವರಣವನ್ನು ರಚಿಸಬಹುದು. ಆಸ್ತಿಯನ್ನು ವಿಲೇವಾರಿ ಮಾಡಲು ಬಯಸುವವರು ಇನ್ನೂ ಸ್ವಲ್ಪ ಸಮಯ ಕಾಯಬೇಕು. ಶೈಕ್ಷಣಿಕ ದೃಷ್ಟಿಯಿಂದ ವಿಷಯಗಳು ಚೆನ್ನಾಗಿ ಕಾಣುತ್ತವೆ. ಅದೃಷ್ಟ ಸಂಖ್ಯೆ: 15, ಅದೃಷ್ಟ ಬಣ್ಣ: ಗುಲಾಬಿ ಕಂದು

ಸಿಂಹ ರಾಶಿ : ತಂತ್ರಗಾರರಿಂದ ಭಾವನಾತ್ಮಕವಾಗಿ ಪ್ರಭಾವಿತರಾಗಬೇಡಿ ಮತ್ತು ಅವನ ಅಥವಾ ಅವಳ ಬೇಡಿಕೆಗಳಿಗೆ ಮಣಿಯಬೇಡಿ. ತುಂಬಾ ನಿಧಾನಿಸಿದರೆ ವಿಷಯಗಳು ಬಿಗಡಾಯಿಸಬಹುದು ಆರಂಭದಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವವರ ಸ್ಥಿತಿ ತ್ವರಿತವಾಗಿ ಸುಧಾರಿಸುತ್ತದೆ. ಕುಟುಂಬದೊಂದಿಗೆ ಒಗ್ಗಟ್ಟಾಗಿ ಸೇರಿ ಆನಂದಿಸುತ್ತೀರಿ ಮತ್ತು ಅದು ನಿಮ್ಮನ್ನು ಉತ್ಸಾಹದಿಂದ ಇರಿಸುತ್ತದೆ. ಶೈಕ್ಷಣಿಕ ವಿಷಯದಲ್ಲಿ ವಿಶೇಷಜ್ಞರ ಸಹಾಯವನ್ನು ತೆಗೆದುಕೊಳ್ಳುವುದು ನಿಮ್ಮ ಗುರಿಯನ್ನು ಸ್ಪಷ್ಟಪಡಿಸಲು ಸಹಾಯ ಮಾಡುತ್ತದೆ. ಅದೃಷ್ಟ ಸಂಖ್ಯೆ: 18, ಅದೃಷ್ಟ ಬಣ್ಣ: ಕೆಂಪು

ಕನ್ಯಾ ರಾಶಿ : ಹೊಸ ಕಾರು ಅಥವಾ ದ್ವಿಚಕ್ರ ವಾಹನವನ್ನು ಖರೀದಿಸುವುದನ್ನು ನಂತರದ ದಿನಾಂಕಕ್ಕೆ ಮುಂದೂಡಬೇಕಾಗಬಹುದು. ಮಾರ್ಕೆಟಿಂಗ್ ಸಿಬ್ಬಂದಿಗಳು ತಮ್ಮ ತಂತ್ರವನ್ನು ಪುನರ್ವಿಮರ್ಶಿಸಬೇಕಾಗಬಹುದು. ನಿರಂತರ ಆರೋಗ್ಯ ಸಮಸ್ಯೆಯನ್ನು ಗುಣಪಡಿಸುವಲ್ಲಿ ಮನೆಮದ್ದು ಪರಿಣಾಮಕಾರಿ ಎಂದು ಸಾಬೀತಾಗುವುದು. ನೀವು ಇತರ ಕುಟುಂಬ ಸದಸ್ಯರೊಂದಿಗೆ ವಿಶೇಷ ಬಂಧವನ್ನು ಆನಂದಿಸುತ್ತಿರುವುದರಿಂದ ಕುಟುಂಬ ಜೀವನವು ಸರಾಗವಾಗಿ ಸಾಗುತ್ತದೆ. ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಬಹುದು ಆದ್ದರಿಂದ ಅದಕ್ಕೆ ತಯಾರಿ ಪ್ರಾರಂಭಿಸಿ. ನಿಮಗೆ ಬೇಕಾದವರೊಬ್ಬರು ವಿಶೇಷವಾದದ್ದನ್ನು ಸಾಧಿಸಿದ್ದಕ್ಕಾಗಿ ನಿಮಗೆ ಸಂತೋಷವಾಗುತ್ತದೆ. ಅದೃಷ್ಟ ಸಂಖ್ಯೆ: 22, ಅದೃಷ್ಟ ಬಣ್ಣ: ಗಾಢ ವೈಡೂರ್ಯ

ತುಲಾ ರಾಶಿ: ಆರ್ಥಿಕ ಸುರಕ್ಷತೆಯು ಪ್ರಸ್ತುತ ಪರಿಸರದಲ್ಲಿ ನಿಮಗೆ ಹೆಚ್ಚು ವಿಶ್ವಾಸವನ್ನುಂಟು ಮಾಡುತ್ತದೆ. ಕೆಲಸದಲ್ಲಿ ಪ್ರತಿಸ್ಪರ್ಧಿಯೊಂದಿಗೆ ವಿವಾದಾತ್ಮಕ ವಿಷಯವನ್ನು ತಿಳಿಸಲು ನೀವು ಹಿಂಜರಿಯಬಹುದು. ಅನಾರೋಗ್ಯದಿಂದ ಬಳಲುತ್ತಿರುವವರು ಔಷಧಿ ತೆಗೆದುಕೊಳ್ಳಲು ನಿರ್ಲಕ್ಷಿಸಬಹುದು ಮತ್ತು ಇದು ಅವರ ಅನಾರೋಗ್ಯವನ್ನು ಹೆಚ್ಚಿಸಬಹುದು. ಪೂರ್ವ ಯೋಜನೆ ಮಾಡಿದರೂ ವ್ಯಾಪಾರಕ್ಕಾಗಿ ಪಟ್ಟಣದ ಪ್ರವಾಸ ಕಾರ್ಯರೂಪಕ್ಕೆ ಬರುವುದಿಲ್ಲ ಆದರೆ ಇದು ನಿಮಗೆ ಆತಂಕಕಾರಿಯಲ್ಲ. ಶೈಕ್ಷಣಿಕ ವಿಷಯದಲ್ಲಿ ವಿಶೇಷಜ್ಞರ ಬೆಂಬಲವು ನಿಮ್ಮ ಕಾರ್ಯಕ್ಷಮತೆಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ. ಅದೃಷ್ಟ ಸಂಖ್ಯೆ: 11, ಅದೃಷ್ಟ ಬಣ್ಣ: ತಿಳಿ ನೀಲ

ವೃಶ್ಚಿಕ ರಾಶಿ : ಆರ್ಥಿಕವಾಗಿ, ಬಾಕಿ ಉಳಿದಿರುವ ಪಾವತಿಗಳನ್ನು ನೀವು ಇಂದು ಸ್ವೀಕರಿಸುವಿರಿ. ಇದರಿಂದ ನಿಮಗೆ ಹೆಚ್ಚಿನ ಸಮಾಧಾನ ಉಂಟಾಗಲಿದೆ. ವೃತ್ತಿಪರ ವಿಷಯದಲ್ಲಿ ಕೆಲವರಿಗೆ ಭಡ್ತಿ ಅಥವಾ ಸಂಬಳದಲ್ಲಿ ಹೆಚ್ಚಳವಾಗಬಹುದು. ಆರೋಗ್ಯ ವಿಷಯ ತೃಪ್ತಿಕರವಾಗಿರುತ್ತದೆ. ಕುಟುಂಬದ ವಿಷಯದಲ್ಲಿ ಎಚ್ಚರವಹಿಸಬೇಕಾಗಬಹುದು. ಯಾವುದೇ ತಕ್ಷಣದ ಪ್ರಯಾಣದ ಯೋಜನೆಗಳನ್ನು ಮಾಡದಿರುವುದು ಉತ್ತಮ. ಶೈಕ್ಷಣಿಕ ವಿಷಯದಲ್ಲಿ ಹೊಸ ಅವಕಾಶಗಳನ್ನು ಪಡೆಯುವ ಮಾಹಿತಿ ನಿಮಗೆ ಸಹಾಯಮಾಡಲಿದೆ. ಅದೃಷ್ಟ ಸಂಖ್ಯೆ: 6, ಅದೃಷ್ಟ ಬಣ್ಣ: ತಿಳಿ ಕಂದು

ಧನು ರಾಶಿ : ಹೂಡಿಕೆ ಆಯ್ಕೆಗಳು ಗೊಂದಲಮಯವಾಗಿ ಕಾಣಿಸಬಹುದು. ಪಟ್ಟಣದ ವ್ಯವಹಾರಗಳನ್ನು ಯೋಜಿಸಲು ಪ್ರಯಾಣವಲ್ಲದೆ ನಿಮಗೆ ಅನ್ಯ ಮಾರ್ಗಗಳು ತೋರಬರುತ್ತವೆ. ನಿಮ್ಮ ಜೀವನಕ್ರಮದಲ್ಲಿ ವ್ಯಾಯಾಮದಂತಹ ಹೊಸ ದಿನಚರಿ ಅಳವಡಿಸಿಕೊಳ್ಳುವುದು ನಿಮಗೆ ಸಹಾಯಕಾರಿ ಎಂದು ಕಾಣಬರುತ್ತದೆ. ಕುಟುಂಬದ ವಿಷಯದಲ್ಲಿ ನಿಮ್ಮ ಬದಲಾವಣೆಗಳನ್ನು ಎಲ್ಲರೂ ಸ್ವಾಗತಿಸುವ ಸಾಧ್ಯತೆಯಿದೆ. ಉತ್ತಮ ಮನೋಸ್ಥೈರ್ಯ ಶೈಕ್ಷಣಿಕ ರಂಗದಲ್ಲಿ ಕಠಿಣ ಸ್ಪರ್ಧೆಗೆ ಹಾಜರಾಗುವವರಿಗೆ ಅದ್ಭುತಗಳನ್ನು ಮಾಡುತ್ತದೆ. ಅದೃಷ್ಟ ಸಂಖ್ಯೆ: 17, ಅದೃಷ್ಟ ಬಣ್ಣ: ಬಿಳಿ

ಮಕರ ರಾಶಿ : ಹಣಕಾಸಿನ ಮಂದಗತಿಯಲ್ಲಿರುವವರು ಇದರ ಬಗ್ಗೆ ತುರ್ತಾಗಿ ಏನಾದರೂ ಮಾಡಬೇಕಾಗಬಹುದು. ಕೆಲಸದಲ್ಲಿರುವ ಯಾರಿಗಾದರೂ ಮಾಡಿದ ಉತ್ತಮ ಸಹಾಯ ಶೀಘ್ರದಲ್ಲೇ ಪ್ರತಿಫಲ ನೀಡಲಿದೆ. ಆರೋಗ್ಯದ ಬಗ್ಗೆ ಅತ್ಯಂತ ಕಾಳಜಿ ವಹಿಸುವಿರಿ. ನೀವು ಇಂದು ಕುಟುಂಬದೊಂದಿಗೆ ಕೆಲವು ಮೋಜಿನ ಕೆಲಸಗಳನ್ನು ಮಾಡುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ವಿದೇಶ ಪ್ರವಾಸ ಮಾಡಲು ಯೋಜಿಸುವವರು ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ಆದ್ದರಿಂದ ಚೆನ್ನಾಗಿ ತಯಾರಾಗಿ ಮತ್ತು ನಿಮ್ಮ ದಾಖಲೆಗಳನ್ನ ಕ್ರಮವಾಗಿ ಇರಿಸಿ. ಒಂದು ಆಸ್ತಿ ನಿಮ್ಮ ಹೆಸರಿಗೆ ಬರಬಹುದಾದ ಸಾಧ್ಯತೆ ಇದೆ.ಅದೃಷ್ಟ ಸಂಖ್ಯೆ: 8, ಅದೃಷ್ಟ ಬಣ್ಣ: ಗುಲಾಬಿ

ಕುಂಭ ರಾಶಿ : ಹಣಕಾಸಿನ ವಿಷಯದಲ್ಲಿ ಸ್ವಲ್ಪ ಪರಿಹಾರ ಸಿಗಲಿದೆ. ನಿಮ್ಮ ವ್ಯಾಪಾರದ ಬಗ್ಗೆ ಸಂಪೂರ್ಣ ಜ್ಞಾನವು ನಿಮಗೆ ಸಿಗುವ ಸಾಧ್ಯತೆಯಿದೆ. ಆಹಾರದಲ್ಲಿ ಕೊಂಚ ಬದಲಾವಣೆ ಅಥವಾ ಉಪವಾಸದಂತಹ ವ್ರತಾಚರಣೆ ಮಾಡಿಕೊಳ್ಳುವುದು ನಿಮಗೆ ಅವಶ್ಯ. ಕುಟುಂಬದಲ್ಲಿ ಒಗ್ಗಟ್ಟಾಗಿ ಸೇರಿ ವಿರಾಮವನ್ನು ಆನಂದಿಸುವಿರಿ. ನಿಮ್ಮಲ್ಲಿ ಕೆಲವರು ಹೊಸ ವಸತಿ ಸೌಕರ್ಯಗಳಿಗೆ ಸ್ಥಳಾಂತರಿಸಲು ಯೋಜಿಸಬಹುದು. ಶೈಕ್ಷಣಿಕ ವಿಷಯದಲ್ಲಿ ಯಾರಿಗಾದರೂ ಮಾರ್ಗದರ್ಶನ ನೀಡುವುದರಿಂದ ನಿಮಗೆ ಅಪಾರ ತೃಪ್ತಿ ಸಿಗುತ್ತದೆ. ಅದೃಷ್ಟ ಸಂಖ್ಯೆ: 1, ಅದೃಷ್ಟ ಬಣ್ಣ: ಕೆನೆ ಬಣ್ಣ

ಮೀನ ರಾಶಿ : ವೃತ್ತಿಪರ ವಿಷಯದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಸಮಯ ಇದು. ಸಾಲವನ್ನು ತೆಗೆದುಕೊಳ್ಳಲು ನೀವು ದಾಖಲೆಗಳನ್ನು ಪೂರ್ಣಗೊಳಿಸಬೇಕಾಗಬಹುದು. ಸ್ವಲ್ಪ ಸಮಯದವರೆಗೆ ಅನಾರೋಗ್ಯ ಅನುಭವಿಸುವವರು ಶೀಘ್ರವಾಗಿ ಚೇತರಿಸಿಕೊಳ್ಳುವ ಸಾಧ್ಯತೆಯಿದೆ. ಕುಟುಂಬದ ಹಿರಿಯರಿಗೆ ನೀವು ಹೆಚ್ಚಿನ ತೃಪ್ತಿಯನ್ನು ನೀಡುವ ಸಾಧ್ಯತೆಯಿದೆ. ಆಸ್ತಿ ಮಾರಾಟಗಾರರು ತಮ್ಮ ಮಾರಾಟವನ್ನು ಹೆಚ್ಚಿಸಲು ಹೊಸ ತಂತ್ರಗಳಿಗಾಗಿ ಯೋಜಿಸಬೇಕಾಗಿದೆ. ಅದೃಷ್ಟ ಸಂಖ್ಯೆ: 4, ಅದೃಷ್ಟ ಬಣ್ಣ: ಗಿಳಿ ಹಸಿರು

Be the first to comment

Leave a Reply

Your email address will not be published.


*