ಹನುಮಂತನ ವಿಗ್ರಹಗಳಿಗೆ ಕೆಂಪು ಮಿಶ್ರಿತ ಕೇಸರಿ ಬಣ್ಣವನ್ನು ಲೇಪಿಸಿರುತ್ತಾರೆ. ಇದು ಯಾಕೆ ಅಂತ ಎಂದಾದರೂ ಯೋಚಿಸಿದ್ದೀರಾ?

ಕನ್ನಡದ ಕಂಪು ಹರಡಿ..

ಹನುಮಂತ ರಾಮನ ಪಾದಸೇವಕ. ಹಾಗಾಗಿ ಹನುಮಂತನ ದೇವಾಲಯದಲ್ಲಿ ರಾಮಾ ಲಕ್ಷ್ಮಣ ಸಹಿತ ಸೀತಾದೇವಿಯಿರುವ ಪುಟ್ಟ ಗುಡಿಯಾಗಲಿ ಅಥವಾ ವಿಗ್ರಹವಾಗಲಿ ಇಟ್ಟು ಪೂಜಿಸುತ್ತಾರೆ. ಹನುಮಂತನನ್ನು ಭಕ್ತಿ, ನಂಬಿಕೆ, ಶೌರ್ಯ ಮತ್ತು ನಿಸ್ವಾರ್ಥ ಪ್ರೀತಿಯ ಸಾರಾಂಶವೆಂದು ಗುರುತಿಸಲಾಗಿದೆ. ಇದು ಒಂದು ವಿಶೇಷವಾದರೆ ಹನುಮಂತನ ವಿಗ್ರಹಕ್ಕೆ ಕೆಂಪು ಮಿಶ್ರಿತ ಕೇಸರಿ ಬಣ್ಣವನ್ನು ಲೇಪಿಸಿರುತ್ತಾರೆ. ಇದನ್ನ ಭಂಡಾರ ಅಂತ ಕೂಡ ಕರೆಯುತ್ತಾರೆ. ಆದರೆ ಹೀಗೆ ಯಾಕೆ ಬಣ್ಣವನ್ನ ವಿಗ್ರಹಕ್ಕೆ ಲೇಪಿಸಿದ್ದಾರೆ ಅಂತ ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆ ಒಂದು ಕಥೆಯೇ ಇದೆ.
ವನವಾಸದಲ್ಲಿದ್ದಾಗ, ಒಂದು ದಿನ ಸೀತೆ ತನ್ನ ಹಣೆಯ ಮೇಲೆ ಸಿಂಧೂರವನ್ನು ಹಚ್ಚುವುದನ್ನು ಹನುಮಂತ ನೋಡಿದ. ಹನುಮಂತ ಇದನ್ನು ನೋಡಿ ಕುತೂಹಲದಿಂದ ಸೀತೆಯನ್ನು ಕೇಳುತ್ತಾನೆ. “ಇದೇನು ತಾಯಿ. ಅದನ್ನು ಏಕೆ ಹಣೆಯ ಮೇಲೆ ಇಡುತ್ತಿದ್ದೀಯಾ?” ಎಂದು ಕೇಳಿದ. ಇದನ್ನು ಲೇಪಿಸುವುದರಿಂದ ತನ್ನ ಗಂಡ ರಾಮ ಧೀರ್ಘಾಯುಷಿಯಾಗುತ್ತಾನೆ ಎಂದು ಸೀತೆ ಆತನಿಗೆ ಹೇಳುತ್ತಾಳೆ.
ಸಿಂಧೂರ ಹಚ್ಚುವುದರಿಂದ ರಾಮನ ದೀರ್ಘಾಯುಷ್ಯವು ಖಚಿತವಾಗುತ್ತದೆ ಎಂದು ತಿಳಿದ ಹನುಮಂತ, ತಕ್ಷಣವೇ ಆ ಸಿಂಧೂರದ ಪುಡಿಯನ್ನು ತೆಗೆದುಕೊಂಡು ಅದನ್ನು ತನ್ನ ಮೈಗೆಲ್ಲಾ ಹಚ್ಚಿಕೊಳ್ಳುವನು.
ಇದನ್ನು ನೋಡಿದ ರಾಮ ಹಾಗು ಸೀತೆ ಹೀಗೇಕೆ ಮಾಡಿದೆ ಎಂದು ಕೇಳುತ್ತಾರೆ. ರಾಮನ ದೀರ್ಘಾಯುಷ್ಯಕ್ಕಾಗಿ ತನ್ನ ಹಣೆಯ ಮೇಲೆ ಸಿಂಧೂರ ಹಚ್ಚಿಕೊಂಡಳು. ಆದರೆ ಸೀತೆ ದೇವತೆಯಾಗಿರುವುದರಿಂದ ಸ್ವಲ್ಪ ಪ್ರಮಾಣದ ಸಿಂಧೂರ ಮಾತ್ರ ಸಾಕು, ಆದರೆ ತಾನು ಯಕಶ್ಚಿತ್ ಕೋತಿ. ಅದಕ್ಕೆ ನನಗೆ ಹೆಚ್ಚಿನ ಪ್ರಮಾಣದ ಸಿಂಧೂರ ಬೇಕು. ಆಗ ಮಾತ್ರ ಅದು ಕೆಲಸ ಮಾಡುತ್ತದೆ ಎನ್ನುತ್ತಾನೆ. ಈತನ ಶುದ್ಧ ಹಾಗು ಮುಗ್ಧ ಪ್ರೀತಿಯನ್ನು ನೋಡಿ ಮಾರುಹೋದ ರಾಮ ಹಾಗು ಸೀತೆ ಆತನ ಮನಸ್ಸಲ್ಲೇ ಆತನನ್ನು ಹರಸುತ್ತಾರೆ.
ಇದರ ಸಂಕೇತವಾಗಿಯೇ, ಎಲ್ಲೆಡೆ ಹನುಮಂತನ ವಿಗ್ರಹಕ್ಕೆ ಸಿಂಧೂರವನ್ನು ಲೇಪಿಸಿರುತ್ತಾರೆ. ಸಿಂಧೂರವನ್ನ ಹನುಮಂತನಿಗೆ ಅರ್ಪಿಸಿದರೆ ಆತನ ನಿಮ್ಮ ಇಷ್ಟಾರ್ಥವನ್ನು ಪೂರೈಸುತ್ತಾನೆ ಎನ್ನಲಾಗಿದೆ. ಹಾಗೆಯೇ ಇನ್ನೊಂದು ವಿಶೇಷವೆಂದರೆ. ಹನುಮ ಬಾಲ ಬ್ರಹ್ಮಚಾರಿ. ಹಾಗಾಗಿ ಆತನನ್ನು ಪೂಜಿಸಲು ಮತ್ತು ಸ್ಪರ್ಶಿಸಲು ಪುರುಷರಿಗೆ ಮಾತ್ರ ಅವಕಾಶ, ಮಹಿಳೆಯರು ವಿಗ್ರಹವನ್ನು ಮುಟ್ಟಬಾರದು.

Be the first to comment

Leave a Reply

Your email address will not be published.


*