
ಜೀ ವಾಹಿನಿಯ ಪ್ರೈಮ್ ಸೀರಿಯಲ್ ಪಾರು ಧಾರಾವಾಹಿ ಈಗ ಒಂದು ರೋಚಕ ತಿರುವು ಪಡೆದುಕೊಂಡಿದೆ.. ಎಲ್ಲರಿಂದ ತಾನು ಮುಚ್ಚಿಟ್ಟಿದ್ದ ತನ್ನ ಹಾಗೂ ಅರಸನ ಕೋಟೆ ಅಖಿಲಾಂಡೇಶ್ವರಿಯವರ ಮಗ ಆದಿತ್ಯನ ಮದುವೆಯಿಂದಾಗಿ ದಿನೇ ದಿನೇ ಒಂದಲ್ಲಾ ಒಂದು ಕಷ್ಟದಲ್ಲಿ ಸಿಲುಕಿಕೊಳ್ಳುತ್ತಿದ್ದ ಪಾರ್ವತಿ ಅಲಿಯಾಸ್ ಪಾರು, ಇಂದು ಅನುಷ್ಕಾಳಿಂದಾಗಿ ಅಖಿಲಾಂಡೇಶ್ವರಿಗೆ ಎಲ್ಲಾ ಸತ್ಯ ತಿಳಿಯುವಂತಾಗಿದೆ.
ಪಾರು ಬಗ್ಗೆ ಬಹಳವೇ ಅಭಿಮಾನ ಪ್ರೀತಿ ಇಟ್ಟುಕೊಂಡಿದ್ದ ಅಖಿಲಾಂಡೇಶ್ವರಿಗೆ ಈ ವಿಷಯ ತಿಳಿದು ಮನಸಲ್ಲಿ ಬಹಳವೇ ಕೋಲಾಹಲವೇದ್ದಂತಾಗಿದೆ. ಆದಿ ಕಟ್ಟಿದ್ದ ತಾಳಿಯನ್ನು ಅನುಷ್ಕಾ ಆದಿ ಹಾಗೂ ಅಖಿಲಾಂಡೇಶ್ವರಿ ಮುಂದೆಯೇ ತಾನೇ ತೆಗೆದು ತೋರಿಸಿದ್ದು ಈಗ ಪಾರುವನ್ನ ಅಪಾಯಕ್ಕೆ ಸಿಲುಕಿಸಿದ್ದಾಳೆ. ಇತ್ತೀಚಿಗೆ ಮನೆಗೆ ಬಂದ ಜ್ಯೋತಿಷಿಗಳು ಕೂಡ ಆದಿಯನ್ನ ಮದುವೆಯಾಗುವ ಹುಡುಗಿ ಪಾರುವಂತೆ ಸಾಮಾನ್ಯ ಹುಡುಗಿಯಾಗಿರುತ್ತಾಳೆ ಎಂದು ಹೇಳಿದ್ದಾಕೆ ತರಾತುರಿಯಲ್ಲಿ ಆದಿ ಮತ್ತು ಅನುಷ್ಕಾ ಮದುವೆ ಮಾಡಲು ಹೊರಟಿರುವ ಅಖಿಲಾಂಡೇಶ್ವರಿ, ಈ ವಿಷಯ ತಿಳಿದು ಈ ಮದುವೆ ನಿಲ್ಲಿಸ್ತಾರಾ ಅಥವಾ ಪಾರುವನ್ನ ಮನೆಯಿಂದ ಹೊರಗೆ ಹಾಕ್ತಾರಾ ಎನ್ನುವುದನ್ನ ತಿಳಿಯಬೇಕೆಂದರೆ ಇಂದಿನ ಹಾಗೂ ಮುಂದಿನ ಸಂಚಿಕೆಗಳನ್ನ ನೋಡಬೇಕಿದೆ.
ಈ ಘಟನೆಯಿಂದಾಗಿ ಜಂಘಾಬಲವೇ ಉಡುಗಿಹೋಗಿರುವ ಪಾರು ಹಾಗೂ ಅವಳ ಅಪ್ಪ ಹನುಮಂತು ಏನ್ಮಾಡ್ತಾರೋ ಅನ್ನೋದು ಕುತೂಹಲಕರ ವಿಷಯವಾಗಿದೆ.