ಅತೀ ಸರಳವಾದ ಚಿನ್ಮುದ್ರೆ ಮಾಡುವುದರಿಂದ ಏನೆಲ್ಲಾ ಉಪಯೋಗಗಳು ಗೊತ್ತೇ?

ಕನ್ನಡದ ಕಂಪು ಹರಡಿ..

ದೇವರನ್ನು ಬೇಡುವುದು ಹಾಗು ಧ್ಯಾನಿಸುವುದು ಪರಸ್ಪರ ವಿರುದ್ಧ ಕ್ರಿಯೆಗಳು. ಹೌದು. ದೇವರನ್ನು ಬೇಡುವಾಗ, ಭಕ್ತನ ಮನಸ್ಸು ತನಗೆ ಏನು ಬೇಕೋ ಅದರ ಬಗ್ಗೆ ಚಿಂತಿಸುತ್ತಿರುತ್ತದೆ. ಆದರೆ ಧ್ಯಾನಿಸುವಾಗ, ಮನಸ್ಸು ಚಂಚಲವಾಗದೆ ದೇವರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆಗ ನಿಮ್ಮ ಜೊತೆ ಮಾತಾಡುವುದು ಅಥವಾ ನಿರ್ದೇಶಿಸುವುದು ದೇವವಾಣಿ. ನೀವು ಮೌನವಾಗಿ ಮನಸ್ಸು ಏಕನಿಷ್ಠೆಯಲ್ಲಿರುವಾಗ ಮಾತ್ರ ಇದು ಸಾಧ್ಯ. ಧ್ಯಾನ ಮಾಡುವಾಗ ವಿಧವಿಧವಾದ ಮುದ್ರೆಗಳನ್ನು ಉಪಯೋಗಿಸುವುದನ್ನು ನೋಡಿರುತ್ತೀರಿ. ಈಗ ನಾವು ಹೇಳಹೊರಟಿರುವುದು ಚಿನ್ಮುದ್ರೆಯ ಬಗ್ಗೆ. ಕೈನ ಪ್ರತೀ ಬೆರಳುಗಳಿಗೂ ಒಂದೊಂದು ಅರ್ಥವಿದೆ.
ಹೆಬ್ಬೆರಳು: ಸರ್ವೋಚ್ಚ ಆತ್ಮವನ್ನು ಪ್ರತಿನಿಧಿಸಿದರೆ, ತೋರುಬೆರಳು ವೈಯಕ್ತಿಕ ಆತ್ಮವನ್ನು ಪ್ರತಿನಿಧಿಸುತ್ತದೆ. ಅಂತೆಯೇ ಮಧ್ಯದ ಬೆರಳು ಅಹಂ ಅನ್ನು, ಉಂಗುರದ ಬೆರಳು ಭ್ರಮೆಯನ್ನು ಹಾಗು ಕಿರುಬೆರಳು ಕರ್ಮವನ್ನು ಪ್ರತಿನಿಧಿಸುತ್ತದೆ.

ಚಿನ್ಮುದ್ರೆಯನ್ನು ಜ್ಞಾನಮುದ್ರೆ ಎಂತಲೂ ಹೇಳುತ್ತಾರೆ. ಚಿನ್ಮುದ್ರಾ ಎನ್ನುವುದು ಚಿತ್ ಮತ್ತು ಮುದ್ರಾ ಎಂಬ ಎರಡು ಪದಗಳ ಸಂಯೋಜನೆಯಾಗಿದೆ, ಚಿತ್ ಎಂದರೆ ಪ್ರಜ್ಞೆ ಎಂದರ್ಥ.ಚಿನ್ಮುದ್ರೆ ಕೆಳಗೆ ಕಾಣುವ ಹಾಗೆ ಹೆಬ್ಬೆರಳು ಹಾಗು ತೋರುಬೆರಳನ್ನು ಸ್ಪರ್ಶಿಸುವ ಮುದ್ರೆಯಾಗಿದೆ. ಇದರ ವಿಶೇಷತೆಯೇನೆಂದರೆ ಇದನ್ನು ಕೇವಲ ಮನುಷ್ಯರು ಮಾತ್ರ ಮಾಡಲು ಸಮರ್ಥರಾಗಿದ್ದಾರೆ. ಯಾವುದೇ ಪ್ರಾಣಿಯ ಬೆರಳುಗಳು ಇದನ್ನು ಮಾಡಲು ಸಾಧ್ಯವಿಲ್ಲ.

ಸಮಾಧಿ ಸ್ಥಿತಿ ಅಥವಾ ದೇಹ-ಮನಸ್ಸು-ಆತ್ಮದ ಸಂಪೂರ್ಣ ಏಕೀಕರಣವು, ವೈಯಕ್ತಿಕ ಪ್ರಜ್ಞೆಯು ದೇಹ, ಭಾವನೆಗಳು ಮತ್ತು ಬುದ್ಧಿಶಕ್ತಿಗಳನ್ನು ಮೀರಿ ಸರ್ವೋಚ್ಚ ಪ್ರಜ್ಞೆಗಳನ್ನು ತಲುಪಿದಾಗ ಮಾತ್ರ ಸಂಭವಿಸುತ್ತದೆ. ಇದಕ್ಕಾಗಿ ಚಿನ್ಮುದ್ರೆಯನ್ನು ಬಳಸುವರು. ಚಿನ್ಮುದ್ರೆಯ ಬಳಕೆ ಹೀಗೂ ಇದೆ. ಇದು ನಮ್ಮನ್ನು ಉನ್ನತ ಆತ್ಮಕ್ಕೆ ಸಂಪರ್ಕಿಸುತ್ತದೆ ಹಾಗು ಸ್ಮರಣಾ ಶಕ್ತಿಯನ್ನು ಹೆಚ್ಚಿಸುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ ಹಾಗು ಮನಸ್ಥಿತಿಯನ್ನು ಬೆಳಗಿಸುತ್ತದೆ,

Be the first to comment

Leave a Reply

Your email address will not be published.


*