ಚೀನಾದಲ್ಲಿ ಇಂದಿಗೆ ಕರೋನ ಪೀಡಿತರು ಎಷ್ಟು ಜನ ಇದ್ದಾರೆ ಗೊತ್ತಾ?

ಕನ್ನಡದ ಕಂಪು ಹರಡಿ..

ಚೀನಾ ದೇಶದ ರಾಷ್ಟ್ರೀಯ ಆರೋಗ್ಯ ಆಯೋಗದ ಇಂದಿನ ವರದಿಯ ಪ್ರಕಾರ, ಚೀನಾದಲ್ಲಿ ದೃಢೀಕರಿಸಲ್ಪಟ್ಟ ನಾವೆಲ್ ಕೊರೊನಾವೈರಸ್ ಪ್ರಕರಣಗಳಲ್ಲಿ ಸುಮಾರು ಶೇಕಡಾ 89 ರಷ್ಟು ಮಂದಿ ಚೇತರಿಸಿಕೊಂಡಿದ್ದಾರಂತೆ ಮತ್ತು ಅವರನ್ನು ಆಸ್ಪತ್ರೆಗಳಿಂದ ಬಿಡುಗಡೆಮಾಡಿದ್ದಾರಂತೆ!
ಹೌದು ಮೂಲಗಳ ಪ್ರಕಾರ ಚೀನಾದಲ್ಲಿ ಪ್ರಸ್ತುತ ಕೇವಲ 5,120 ರೋಗಿಗಳು ಮಾತ್ರ ಆಸ್ಪತ್ರೆಗಳಲ್ಲಿ ಉಳಿದಿದ್ದಾರೆ!. ಕಳೆದ ಡಿಸೆಂಬರ್‌ನಲ್ಲಿ ಏಕಾಏಕಿ ತನ್ನ ಅಟ್ಟಹಾಸವನ್ನು ವುಹಾನ್ ಪ್ರಾಂತ್ಯದಿಂದ ಶುರುಮಾಡಿದ್ದ ಈ ಕರೋನ ವೈರಾಣುವಿಗೆ ಸೋಂಕಿತರಾಗಿ ದೇಶದಲ್ಲಿ ವರದಿಯಾದ 81,093 ಪ್ರಕರಣಗಳಲ್ಲಿ ಬರೋಬ್ಬರಿ 72,703 ಜನರು ಚೇತರಿಸಿಕೊಂಡಿದ್ದಾರೆ.


ಹಾಗಿದ್ದರೂ ಕೂಡ ರಾಷ್ಟ್ರೀಯ ಆರೋಗ್ಯ ಆಯೋಗ ವರದಿ ಮಾಡಿರುವ ಪ್ರಕಾರ ಮಾರ್ಚ್ 22ರ ಹೊತ್ತಿಗೆ ಅಂದರೆ ನಿನ್ನೆಯವರೆಗೆ, ಚೀನಾದ ಮುಖ್ಯ ಭೂಭಾಗ ಮತ್ತು ಕ್ಸಿನ್‌ಜಿಯಾಂಗ್ ಉತ್ಪಾದನೆ ಮತ್ತು ನಿರ್ಮಾಣ ದಳದ 31 ಪ್ರಾಂತೀಯ ಮಟ್ಟದ ಪ್ರದೇಶಗಳಲ್ಲಿ 81,093 ದೃಢಪಡಿಸಿದ ಪ್ರಕರಣಗಳು ಮತ್ತು 3,270 ಸಾವುಗಳ ವರದಿಗಳನ್ನು ಪಡೆದಿದೆ ಮತ್ತು 72,703 ರೋಗಿಗಳನ್ನು ಗುಣಪಡಿಸಲಾಗಿದೆ ಎನ್ನಲಾಗಿದೆ. ಇದರಲ್ಲಿ 1,749 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು 136 ಶಂಕಿತ ಪ್ರಕರಣಗಳು ಉಳಿದಿವೆ ಎಂದು ವಿವರವಾದ ವರದಿ ನೀಡಿದೆ.
ಆಶ್ಚರ್ಯವೆಂದರೆ ಕರೋನ ಕೇಂದ್ರಬಿಂದುವಾದ ಹುಬೈ ಪ್ರಾಂತ್ಯದಲ್ಲಿ ಭಾನುವಾರದವರೆಗೆ ಯಾವುದೇ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿಲ್ಲ ಹಾಗು 447 ರೋಗಿಗಳನ್ನು ಗುಣಪಡಿಸಲಾಗಿದೆ. ಇದರಲ್ಲಿ 434 ಜನರು ವುಹಾನ್‌ ವಾಸಿಗಳು. ಆದರೆ ಚೀನಾ ಮೇನ್ ಲ್ಯಾಂಡ್ 39 ಹಾಗು ಬೀಜಿಂಗ್‌ನಲ್ಲಿ 10 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ವರದಿ ಮಾಡಿದೆ.

Be the first to comment

Leave a Reply

Your email address will not be published.


*