ಕರೋನಾ ಗೆ ಕಡಿವಾಣ ಹಾಕಲು ಎಂತಹ ಆಹಾರವನ್ನು ಸೇವಿಸಬೇಕು ಗೊತ್ತಾ?

ಕನ್ನಡದ ಕಂಪು ಹರಡಿ..

ಎಲ್ಲೆಡೆ ಕರೋನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಅಲ್ಲೊಂದು ಇಲ್ಲೊಂದು ಸಾವು ಸಂಭವಿಸಿರುವ ವಿಚಾರ ಗಂಟೆಗೊಮ್ಮೆ ಕೇಳಿಬರುತ್ತಿದೆ. ಇದು ನಿಮ್ಮ ಹಾಗು ನಿಮ್ಮವರ ಬಳಿ ಸುಳಿಯುವುದನ್ನು ತಡೆಯಲು ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು. ಅಪೋಲೋ ಆಸ್ಪತ್ರೆಯ ತಜ್ಞ ವೈದ್ಯರು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವುದನ್ನು ತಿಳಿಸಿದ್ದಾರೆ.

ಅದರ ಪ್ರಕಾರ ನೀವು ಪಾಲಿಸಿದರೆ ರೋಗ ನಿರೋಧಕ ಶಕ್ತಿ ತಂತಾನೇ ಹೆಚ್ಚುತ್ತದೆ. ಈ ಆಹಾರವನ್ನು ಪುಟ್ಟ ಮಕ್ಕಳಿಗೆ ಹಾಗು ವಯೋ ವೃದ್ಧರಿಗೆ ಹೆಚ್ಚಾಗಿ ನೀಡಿ. ಬನ್ನಿ ಆ ಆಹಾರ ವಸ್ತುಗಳ ಬಗ್ಗೆ ನಿಮಗೆ ವಿವರವಾದ ಮಾಹಿತಿಯನ್ನು ಇಲ್ಲಿ ತಿಳಿಸಿದ್ದೇವೆ..
ಅತಿ ಹೆಚ್ಚು ವಿಟಮಿನ್ ಸಿ ಹೊಂದಿರುವ ಹಣ್ಣುಗಳಾದ ನಿಂಬೆ, ಕಿತ್ತಳೆ, ಟೊಮೇಟೊ, ಬೆರ್ರಿ ಹಣ್ಣುಗಳು, ಹಾಗು ಅನಾನಸ್, ಪರಂಗಿ, ಕಿವಿ, ಸೀಬೆ ಹಣ್ಣುಗಳು ಬಹಳ ಪ್ರಯೋಜನಕಾರಿಯಾಗಬಲ್ಲವು. ಈ ಹಣ್ಣುಗಳನ್ನು ಆಗಾಗ್ಗೆ ಸೇವಿಸಿ. ಇನ್ನು ತರಕಾರಿಗಳಲ್ಲಿ ಕ್ಯಾರಟ್, ಬೀಟ್ರೂಟ್, ಪಾಲಾಕ್, ಎಲೆ ಕೋಸು, ಹೂಕೋಸು, ಬ್ರೊಕೋಲಿ, ಬದನೇಕಾಯಿ ಹಾಗು ಕುಂಬಳಕಾಯಿ ಬಹಳ ಸೂಕ್ತವಾದವು. ಹಾಗೆಯೇ ಇವುಗಳ ಜೊತೆಗೆ ನೆನೆಸಿದ ಬಾದಾಮಿ ಬೀಜ ಅಥವಾ ವಾಲ್ ನಟ್ ಬಳಕೆ ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ.

ಇದಲ್ಲದೆ ಕಾಫಿ ಟೀ ಬದಲು ಗ್ರೀನ್ ಟೀ, ಲೆಮನ್ ಟೀ ಕುಡಿಯಿರಿ. ಅಡುಗೆಯಲ್ಲಿ ಹಳದಿ ಹಾಗು ಶುಂಠಿ ಬಳಕೆ ಒಳ್ಳೆಯದು.
ತಜ್ಞರು ಹೇಳುವ ಪ್ರಕಾರ ಪ್ರತಿನಿತ್ಯ ಎರಡೂವರೆ ಯಿಂದ ಮೂರು ಲೀಟರ್ ನೀರಿನಂಶ ದೇಹಕ್ಕೆ ಬೇಕು. ಇದಕ್ಕಾಗಿ ನೀರು, ಎಳನೀರು, ಗ್ರೀನ್ ಟೀ, ತಾಜಾ ಹಣ್ಣಿನ ಜ್ಯೂಸು, ಹಾಲು ಮಜ್ಜಿಗೆ ಸೇವಿಸಬೇಕು. ಈ ಮೇಲ್ಕಂಡ ಆಹಾರ ಪದಾರ್ಥಗಳು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಅವರನ್ನು ಚೈತನ್ಯಶೀಲರನ್ನಾಗಿ ಇಡುತ್ತದೆ.
ಕರೋನ ಮಹಾಮಾರಿಗೆ ಈ ರೀತಿಯ ಆಹಾರ ಪದಾರ್ಥಗಳು ಅತ್ಯಂತ ಸೂಕ್ತವಾಗಿದೆ.

Be the first to comment

Leave a Reply

Your email address will not be published.


*