ಜವಾನ್ ಗೆ ಕಿಸಾನ್ ಗೆ ಜೈ ಅಂದ ಕರುನಾಡ ಚಕ್ರವರ್ತಿ.. ಹ್ಯಾಟ್ರಿಕ್ ಹೀರೊ ಹಾಡು ಕುಣಿತಕ್ಕೆ ಜನ ಫುಲ್ ಫಿದಾ..

ಕನ್ನಡದ ಕಂಪು ಹರಡಿ..

ಯೋಧ ನಾಡನ್ನ ಕಾಯ್ದರೆ, ರೈತ ನಾಡಿನ ಜನರನ್ನ ಕಾಪಾಡ್ತಾನೆ. ಇವರು ನಮ್ಮ ಎರಡು ಕಣ್ಣುಗಳು ಅಂತ ಮನಸಾರೆ ಯೋಧರನ್ನ ಹಾಗೆ ರೈತರನ್ನು ಹೊಗಳಿದ್ರು ಹ್ಯಾಟ್ರಿಕ್ ಹೀರೋ ಶಿವಣ್ಣ. ದಾವಣಗೆರೆಯ ಹೊನ್ನಾಳಿಯಲ್ಲಿ ರಾಜ್ಯಮಟ್ಟದ ಕೃಷಿಮೇಳ ನಡೆಯುತ್ತಿದೆ. ಈ ಮೂರು ದಿನದ ಮೇಳದ ನೇತೃತ್ವವನ್ನು ಮುಖ್ಯ ಮಂತ್ರಿಗಳ ಸಂಸದೀಯ ಕಾರ್ಯದರ್ಶಿ ರೇಣುಕಾಚಾರ್ಯ ವಹಿಸಿಕೊಂಡಿದ್ದಾರೆ. ಈ ಮೇಲಕ್ಕೆ ಉದ್ಘಾಟನೆ ಮಾಡಲು ಡಾ. ಶಿವರಾಜ್ ಕುಮಾರ್, ಯೋಗ ಗುರು ಬಾಬಾ ರಾಮದೇವ್, ಕಾಶಿ ಜಗದ್ಗುರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಶಿವಣ್ಣ “ಗಡಿಯಲ್ಲಿ ಯೋಧ ದೇಶ ಕಾಪಾಡ್ತಾರೆ. ಹಾಗೆ ರೈತ ಕೃಷಿ ಮಾಡುತ್ತಾರೆ. ಯೋಧ ಮತ್ತು ರೈತ ಎರಡು ಕಣ್ಣುಗಳಿದ್ದಂತೆ. ಯಾವುದೆ ಕಣ್ಣಿಗೆ ನೋವಾದರು ಕಷ್ಟವಾಗುತ್ತೆ. ಅಪ್ಪಾಜಿ ಬಂಗಾರದ ಮನುಷ್ಯ ಸಿನಿಮಾದಲ್ಲಿ ರೈತನಾಗಿದ್ದರು. ಹಾಗಾಗಿ ರೈತರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಯಾವುದೆ ಕಾರಣಕ್ಕೂ ರೈತ ಸಾಯೋ ಮಾತಾನಾಡಬಾರದು” ಎಂದರು. ಅನ್ನದಾತರಿಗೆ ಇನ್ನಷ್ಟು ಧೈರ್ಯ ತುಂಬಲು ‘ಆಗದು ಎಂದು ಕೈಕಟ್ಟಿಕುಳಿತರೆ..’ ಹಾಡನ್ನು ಕೂಡ ಹಾಡಿದರು. ಇದರ ಜೊತೆಗೆ ನೆರೆದಿದ್ದ ಜನರ ಕೋರಿಕೆಯ ಮೇರೆಗೆ ಟಗರು ಹಾಡಿಗೆ ಹೆಜ್ಜೆ ಹಾಕಿದ ಶಿವಣ್ಣ, ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಶಿವಣ್ಣನ ಹಾಡು ಕುಣಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೂಲತಃ ಉತ್ತರ ಭಾರತದವರಾದ ಬಾಬಾ ರಾಮ್ ದೇವ್ ಕನ್ನಡಲ್ಲೇ ಮಾತಾಡಿ, ಕರ್ನಾಟಕದ ಜನ ರಾಷ್ಟ್ರಭಕ್ತಿ ಹಾಗೂ ಆಧ್ಯಾತ್ಮದ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ ಎಂದರು. ಆಯುರ್ವೇದದ ಮಹತ್ವದ ಬಗ್ಗೆಯೂ ಮಾತನಾಡಿದ ಅವರು, ಕರೋನಾ ರೋಗಕ್ಕೂ ಕೆಲವು ಸಲಹೆಗಳನ್ನು ನೀಡಿದರು ಹಾಗೆಯೇ ಯೋಗದಿಂದಲೂ ಇದನ್ನು ನಿಯಂತ್ರಿಸಬಹುದಾದ ವಿಧಗಳನ್ನೂ ಕೂಡ ತಿಳಿಸಿದರು.

Be the first to comment

Leave a Reply

Your email address will not be published.


*