ಕರೋನಾ ಕಾಟದಿಂದ ಊಟ ಸಿಗ್ತಿಲ್ವಾ.. ಹಾಗಿದ್ರೆ ಈ ನಂಬರ್ ಗೆ ಕರೆಮಾಡಿ..

ಕನ್ನಡದ ಕಂಪು ಹರಡಿ..

ಕರ್ನಾಟಕದಲ್ಲಿ ಕರೋನ ವೈರಸ್ ಕುರಿತ ಅಧಿಕೃತ ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರೂಪಿಸಿರುವ ವೆಬ್ಸೈಟ್ ಹಾಗು ಬಡ ಕೂಲಿ ಕಾರ್ಮಿಕರ ಹಸಿವು ನೀಗಿಸಲು ಕಾರ್ಮಿಕ ಇಲಾಖೆ ಸ್ಥಾಪಿಸಿರುವ ಶುಲ್ಕರಹಿತ ದೂರವಾಣಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ಚಾಲನೆ ನೀಡಿದರು.

https://covid19.karnataka.gov.in/wordpress/ ಹಾಗೂ ಕೂಲಿ ಹಾಗೂ ವಲಸೆ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆಯ ಸಹಾಯವಾಣಿ 155214 ಕರೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು. ವೆಬ್ಸೈಟ್ ವೈಶಿಷ್ಟ್ಯ : ಸಿಎಂ ಸಂದೇಶ, ಸಹಾಯವಾಣಿ ಮಾಹಿತಿ, ಮುನ್ನೆಚ್ಚರಿಕೆ ಕ್ರಮಗಳು, ಕೋವಿಡ್-19 ಮಾಹಿತಿ, 21ದಿನಗಳ ಲಾಕ್ಡೌನ್ ವಿವರ, ಸ್ವಯಂ ಸೇವಕರಾಗುವವರಿಗಾಗಿ ಅವಕಾಶ ಇತ್ಯಾದಿ ಮಾಹಿತಿ ವೆಬ್ಸೈಟ್ ನಲ್ಲಿ ಲಭ್ಯವಿದೆ.

ಸಹಾಯವಾಣಿಯ ವಿಶೇಷ : ಕೂಲಿಕಾರರು ಸಹಾಯವಾಣಿಗೆ ಕರೆ ಮಾಡಿದಲ್ಲಿ ಅವರು ಎಲ್ಲಿಂದ ಕರೆ ಮಾಡಿದ್ದಾರೆ ಎಂಬುದನ್ನು ಧೃಢಪಡಿಸಿಕೊಂಡು ಸಮೀಪದ ಇಂದಿರಾ ಕ್ಯಾಂಟೀನ್ ಅಥವಾ ಸರ್ಕಾರೇತರ ಸಂಘ ಸಂಸ್ಥೆಗಳ ನೆರವಿನಿಂದ ಅವರು ಇದ್ದಲ್ಲೇ ಊಟದ ವ್ಯವಸ್ಥೆ ಮಾಡಲು ಸಹಾಯವಾಣಿ ನೆರವು ಒದಗಿಸಲಿದೆ. ಮುಖ್ಯಮಂತ್ರಿಯವರ ಗವರ್ನೆನ್ಸ್ ಸಲಹೆಗಾರ ಬೇಳೂರು ಸುದರ್ಶನ್, ಕಾರ್ಮಿಕ ಹಾಗು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರಕಾರದ ಕಾರ್ಯದರ್ಶಿ ಕ್ಯಾಪ್ಟನ್ ಪಿ. ಮಣಿವೆಣ್ಣನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಕೂಡ ಸಂದರ್ಭದಲ್ಲಿ ಹಾಜರಿದ್ದರು..

Be the first to comment

Leave a Reply

Your email address will not be published.


*