ಟಿಆರ್ ಪಿ ಲೆಕ್ಕಚಾರವನ್ನೆ ತಲೆಕೆಳಗಾಗಿಸಿದ ಆರ್ಯವರ್ಧನ್..!! ರೇಟಿಂಗ್ ನೋಡ್ರಿದೆ ಶಾಕ್ ಆಗೋದು ಗ್ಯಾರಂಟಿ..

ಕನ್ನಡದ ಕಂಪು ಹರಡಿ..

ಇತ್ತೀಚಿಗೆ ಎಲ್ಲಿ ನೋಡಿದ್ರೆ ಅಲ್ಲಿ ‘ಜೊತೆಜೊತೆಯಲಿ‌’ ಧಾರವಾಹಿಯದೇ ಸುದ್ದಿ. ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ವಾಹಿನಿಗಳಲ್ಲಿ ‘ಜೊತೆಜೊತೆಯಲಿ’ ಧಾರಾವಾಹಿ ಮಾಡಿರುವ ಕಮಾಲ್ ಅಷ್ಟಿಷ್ಟಲ್ಲ. ದಿನೇ ದಿನೇ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ ಹಾಗೆಯೇ ಧಾರಾವಾಹಿಯ ಕ್ರೇಜ್ ಕೂಡ ಕಡಿಮೆಯಾಗುತ್ತಿಲ್ಲ. ಯಾಕೆಂದ್ರೆ ಪ್ರತಿಯೊಂದು ಪಾತ್ರವೂ ಪೇಕ್ಷಕರ ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಇನ್ನು ಈ ಧಾರಾವಾಹಿ ಇತ್ತೀಚಿಗೆ 50 ಸಂಚಿಕೆಗಳು ಪೂರೈಸಿದೆ, ಯಾವುದೇ ಧಾರಾವಾಹಿ ಪ್ರಾರಂಭದಲ್ಲಿ ಇದ್ದ ರೇಟಿಂಗ್ ಮುಂದಿನ ದಿನಗಳಲ್ಲಿ ಕಾಯ್ದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಆದರೆ ಜೊತೆಜೊತೆಯಲಿ ಧಾರಾವಾಹಿ ಮಾತ್ರ ಪ್ರಾರಂಭದಲ್ಲಿ ಇತಿಹಾಸ ನಿರ್ಮಿಸಿದ ಟಿಆರ್ ಪಿ ದಾಖಲೆಯನ್ನು ಬ್ರೇಕ್ ಮಾಡಿದೆ. ಹೌದು, ಈ ವಾರದ ರೇಟಿಂಗ್ ಮೊದಲ ವಾರ ಪಡೆದುಕೊಂಡ 13.9 ರೇಟಿಂಗ್ ನನ್ನೆ ಮುರಿದು ಹಾಕಿದೆ. ಹಾಗಿದ್ರೆ ಈ ವಾರದ ರೇಟಿಂಗ್ ಎಷ್ಟು ಅಂತೀರಾ.. ಮುಂದೆ ಓದಿ…

ಈ ವಾರ ಹೊರ ಬಂದ ಟಿಆರ್ ಪಿಯಲ್ಲಿ ಜೊತೆಜೊತೆಯಲಿ ಪಡೆದುಕೊಂಡದ್ದು 15.2 ರೇಟಿಂಗ್. ಈ ಮೂಲಕ ತಾವೇ ನಿರ್ಮಿಸಿದ ದಾಖಲೆಯನ್ನು ತಾವೇ ಮುರಿದಿದ್ದಾರೆ. ಜೊತೆಜೊತೆಯಲಿ ಧಾರಾವಾಹಿಯ ಯಶಸ್ಸು ಹಾಗೂ ರೇಟಿಂಗ್ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಲ್ಲದೆ ಪೇಕ್ಷಕರಿಗೆ ಧಾರಾವಾಹಿ ಮೇಲಿನ ನಿರೀಕ್ಷೆಯನ್ನು ಇನ್ನು ಹೆಚ್ಚುವರಿ ಮಾಡಿದೆ. ಒಟ್ಟಿನಲ್ಲಿ ಕಿರುತೆರೆಯಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಜೊತೆಜೊತೆಯಲಿ, ಮತ್ತಷ್ಟು ಯಶಸ್ಸಿನ ಉತ್ತುಂಗಕ್ಕೆ ಏರಲಿ ಎಂಬುದು ಅಭಿಮಾನಿಗಳ ಅಶಯ.

Be the first to comment

Leave a Reply

Your email address will not be published.


*