ಭಾರತಕ್ಕೆ ಮಾದರಿಯಾಗಲಿದೆ ವಿಯೆಟ್ನಾಂ ದೇಶದ ಅಕ್ಕಿ ಎಟಿಎಂಗಳು!!

ಕನ್ನಡದ ಕಂಪು ಹರಡಿ..

ಇದು ಅಂತಿಂಥಾ ಎಟಿಎಂ ಅಲ್ಲ. ಈ ಕರೋನ ದೆಸೆಯಿಂದ ಹಣಕ್ಕಿಂತ ಜನಕ್ಕೆ ಆಹಾರ ಮುಖ್ಯ ಎನ್ನುವುದು ಅರಿವಾಗುತ್ತಲಿದೆ. ಇದೆ ಪರಿಸ್ಥಿತಿ ಈಗ ಭಾರತಕ್ಕಿಂತ ಬಡದೇಶವಾದ ವಿಯೆಟ್ನಾಂ ದು. ವಿಯೆಟ್ನಾಂನಲ್ಲಿ ಕರೋನವೈರಸ್ ಸೋಂಕಿತರು ಸುಮಾರು 265 ಜನ ಹಾಗು ಮರಣಹೊಂದಿದವರು ೦!!. ಇಲ್ಲಿ ವಿಶ್ವದ ಇತರ ಭಾಗಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಅಗತ್ಯವಿರುವವರಿಗೆ ಸಹಾಯ ಮಾಡಲು ಈ “ಅಕ್ಕಿ ಎಟಿಎಂ” ಗಳನ್ನು ವಿಯೆಟ್ನಾಂ ಸುತ್ತಲೂ ಸ್ಥಾಪಿಸಲಾಗಿದೆ. ಇದು ಅವಶ್ಯಕತೆಯಿರುವ ಬಡವರಿಗೆ ಉಚಿತ ಅಕ್ಕಿಯನ್ನು ನೀಡುವ ಯಂತ್ರ!!

ಇಲ್ಲಿನ ಸರ್ಕಾರವು ಸಾಮಾಜಿಕ ದೂರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ ಹಾಗೆಯೇ ಅನೇಕ ಸಣ್ಣ ಉದ್ಯಮಗಳನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಿದೆ. ಆದರೆ ಸಾವಿರಾರು ಜನ ಕೆಲಸ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಆದಾಯವಿಲ್ಲದ ಈ ಜನರಿಗೆ, ಉದ್ಯಮಿಗಳು ಮತ್ತು ದಾನಿಗಳು ವಿಯೆಟ್ನಾಂನ ಹಲವಾರು ನಗರಗಳಲ್ಲಿ ಉಚಿತ ಅಕ್ಕಿಯನ್ನು ವಿತರಿಸುವ ಯಂತ್ರಗಳನ್ನು ಸ್ಥಾಪಿಸಿದ್ದಾರೆ. ನೆರೆ ದೇಶ ತೈವಾನ್ ನಲ್ಲಿ ಕೂಡ ಕರೋನವೈರಸ್ ಗೆ ಪ್ರತಿಕ್ರಿಯೆ ಅತ್ಯುತ್ತಮವಾಗಿದೆ ಎಂದು ವರದಿಯಾಗಿದೆ.

ವಿಯೆಟ್ನಾಂ ನ ಹನೋಯಿಯಲ್ಲಿ, ದೊಡ್ಡ ನೀರಿನ ತೊಟ್ಟಿಯಂತಿರುವ ಈ ಎಟಿಎಂ ನಲ್ಲಿ ಅಕ್ಕಿ ವಿತರಣೆ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಇರುತ್ತದೆ. ಸಾಲಿನಲ್ಲಿ ಕಾಯುವವರು ಒಬ್ಬರಿಗೊಬ್ಬರು ಆರು ಅಡಿ ಅಂತರದಲ್ಲಿ ನಿಲ್ಲಬೇಕು ಮತ್ತು ಅಕ್ಕಿ ಸ್ವೀಕರಿಸುವ ಮೊದಲು ಅವರು ಹ್ಯಾಂಡ್ ಸ್ಯಾನಿಟೈಜರ್ ಬಳಸಬೇಕು ಎಂದು ಸ್ಥಳೀಯ ಪತ್ರಿಕೆ ಹನೋಯಿ ಟೈಮ್ಸ್ ವರದಿ ಮಾಡಿದೆ. ಪ್ರತಿ ಸ್ಥಳೀಯ ನಿವಾಸಿಗಳಿಗೆ 2 ಕಿಲೋಗ್ರಾಂಗಳಷ್ಟು (4.4 ಪೌಂಡ್) ಉಚಿತ ಅಕ್ಕಿಯನ್ನು ಒದಗಿಸುತ್ತದೆ.
ಹೋ ಚಿ ಮಿನ್ಹ್ ನಗರದಲ್ಲಿ, ಅಕ್ಕಿ ಎಟಿಎಂ ಅಕ್ಕಿಯನ್ನು 24/7 ವಿತರಿಸುತ್ತದೆ ಮತ್ತು ಡಾ ನಂಗ್‌ನಲ್ಲಿ ಮುಂದಿನ ವಾರ ಎರಡು ಅಕ್ಕಿ ಎಟಿಎಂಗಳನ್ನು ಸ್ಥಾಪಿಸಲಾಗುವುದಂತೆ. ಇಂತಹ ಸಾಮಾಜಿಕ ಕಳಕಳಿ ಹಾಗು ವೈಯಕ್ತಿಕ ಜವಾಬ್ದಾರಿ ಭಾರತಕ್ಕೆ ನಿಜವಾಗಿಯೇ ಪ್ರಸ್ತುತ ಬೇಕಾಗಿದೆ. ಏನಂತೀರಾ.. ನಿಮ್ಮ ಅಭಿಪ್ರಾಯವನ್ನ ನಮ್ಮೊಂದಿಗೆ ಹಂಚಿಕೊಳ್ಳಿ..

Be the first to comment

Leave a Reply

Your email address will not be published.


*