ನಿಮ್ಮ ಸಂಗಾತಿ ಮಂಗಳವಾರ ಹುಟ್ಟಿದ್ದರೆ, ಅವರ ಬಗ್ಗೆ ನೀವು ಈ ವಿಷಯಗಳನ್ನು ತಪ್ಪದೇ ತಿಳಿದುಕೊಳ್ಳಿ..

ಕನ್ನಡದ ಕಂಪು ಹರಡಿ..

ಜೀವನದಲ್ಲಿ ಏನೇ ಸಂಪಾದಿಸಿಲ್ಲದಿದ್ದರೂ ಒಬ್ಬ ಆತ್ಮೀಯ ಗೆಳೆಯನನ್ನು ಹೊಂದಿದ್ದರೆ ಅದು ನಿಮಗೆ ಇಂತಹುದೇ ಸಂದರ್ಭದಲ್ಲೂ ಬೆನ್ನೆಲುಬಾಗಿ ಬೆಂಬಲ ನೀಡುತ್ತಾರೆ. ಆದರೆ ಅದೇ ಗೆಳೆಯ ಅಥವಾ ಗೆಳತಿ ಮಂಗಳವಾರದ ದಿನದಂದು ಹುಟ್ಟಿದವರಾಗಿದ್ದರೆ ಅಂತಹವರನ್ನು ಎಂದಿಗೂ ಬಿಟ್ಟುಕೊಡಬೇಡಿ ಹಾಗೆಯೇ ಅವರನ್ನು ಕಳೆದುಕೊಳ್ಳಬೇಡಿ. ಅವರಂತಹ ಗೆಳೆಯರು ಜೀವನದಲ್ಲಿ ತಾವು ಮಾತ್ರ ಏಳಿಗೆಯಾಗದೆ, ತಮ್ಮವರನ್ನೂ ಕೂಡ ಕಷ್ಟದಲ್ಲಿ ಕೈಹಿಡಿಯುವಂತಹವರು.
ಹೌದು. ಇದು ನಿಜ. ಮಂಗಳವಾರದ ದಿನದಂದು ಜನಿಸಿದವರು ಅತ್ಯಂತ ಪ್ರೀತಿಪಾತ್ರರಾಗಿರುತ್ತಾದೆ. ಇವರು ಸುಂದರವಾಗಿದ್ದು, ಉತ್ಸಾಹದ ಚಿಲುಮೆಯಾಗಿರುತ್ತಾರೆ. ಇವರು ಹಣಕ್ಕಾಗಲಿ, ಆಮಿಷಕ್ಕಾಗಲಿ ಬಲಿಯಾಗುವುದಿಲ್ಲ. ಬದಲಿಗೆ ವ್ಯಕ್ತಿತ್ವಕ್ಕೆ ಬಹಳವೇ ಬೆಲೆ ನೀಡುತ್ತಾರೆ. ಅತ್ಯಂತ ಪ್ರಾಮಾಣಿಕರಾಗಿದ್ದು, ನೀವು ನಂಬುವುದಕ್ಕಿಂತ ಹೆಚ್ಚು ವಿಶ್ವಾಸಿಗಳಾಗಿರುತ್ತಾರೆ. ಯಾರೇ ಆದರೂ ಗೌರವ ಕೊಡುವಂತ ವ್ಯಕ್ತಿತ್ವ ಇವರದಾಗಿರುತ್ತದೆ.
ಹುಟ್ಟಿದಾಗ ಇಂತಹ ಬಡತನದ ಸ್ಥಿತಿಯಲ್ಲಿದ್ದರೂ ಮುಂದಿನ ದಿನಗಳಲ್ಲಿ ಇವರು ಧನವಂತರಾಗಿ ಯಶೋವಂತರಾಗಿ ಕೀರ್ತಿ ಪಡೆಯುತ್ತಾರೆ. ಇವರ ಆಶಾವಾದಿತನ ಹಾಗು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಗುಣವೇ ಇದಕ್ಕೆ ಕಾರಣ. ಇವರ ಮುಂದಾಳತ್ವ ಗುಣ ಎಲ್ಲರನ್ನೂ ಸರಿದಾರಿಯಲ್ಲಿ ನಡೆಯಲು ಸಹಾಯ ಮಾಡುತ್ತದೆ.
ಸಹೃದಯಿಗಳೂ ಪ್ರಾಮಾಣಿಕರೂ ಆಗಿರುವ ಇವರ ಒಂದೇ ಒಂದು ಕಪ್ಪು ಚುಕ್ಕೆ ಎಂದರೆ ಅದು ಮುಂಗೋಪಿತನ. ಯಾರಾದರೂ ಇವರ ಗುಣದ ಬಗ್ಗೆ ಅವಹೇಳನ ಮಾಡಿದರೆ ಅಥವಾ ಅವರ ಆಪ್ತರ ಬಗ್ಗೆ ಕೆಟ್ಟ ಮಾತಾಡಿದರೆ ಸಹಿಸದೆ ತಕ್ಷಣ ಕೋಪ ಮಾಡಿಕೊಂಡು ಅತಿರೇಕಕ್ಕೆ ಹೋಗುತ್ತಾರೆ. ಇದು ಇವರಿಗೆ ತೊಂದರೆ ಉಂಟುಮಾಡುತ್ತದೆ. ಏಕೆಂದರೆ ಇವರು ಬೇರೆಯವರಿಗೂ ಕೂಡ ನೋವನ್ನು ಉಂಟು ಮಾಡೋದಕ್ಕೆ ಬಯಸುವುದಿಲ್ಲ .
ಇನ್ನು ಮಂಗಳವಾರ ಹುಟ್ಟಿದವರು ತಮ್ಮ ಭವಿಷ್ಯದ ಬಗ್ಗೆ ಗಹನವಾಗಿ ಯೋಚಿಸಿ ಅದಕ್ಕೆ ಪೂರಕವಾಗಿ ನಡೆದುಕೊಂಡು ಆಡಿದ್ದನ್ನು ಮಾಡಿ ತೋರಿಸುತ್ತಾರೆ. ಬಹಳವೇ ಸಾಹಸಿ ಸ್ವಭಾವದ ಇವರು ಜೀವನದಲ್ಲಿ ಎಂದೂ ಚಟುವಟಿಕೆ ಉಳ್ಳವರಾಗಿರುತ್ತಾರೆ. ಉತ್ತಮ ಆರೋಗ್ಯ, ಜೀವನ ಶೈಲಿಯನ್ನು ಅಳವಡಿಸಿಕೊಂಡಿರುತ್ತಾರೆ. ಈ ಎಲ್ಲಾ ಗುಣಗಳನ್ನು ಒಳಗೊಂಡಿರುವ ಗೆಳೆಯನೊಬ್ಬ ನಿಮಗೆ ಪ್ರಾಣಸ್ನೇಹಿತನಾಗಿ ಇದ್ದರೆ ನಿಮ್ಮ ಜೀವನ ಸುಖಮಯವಾಗಿರುತ್ತದೆ. ಆದ್ದರಿಂದ ಅಂತಹ ಗೆಳೆಯರನ್ನು ಸಂಪಾದಿಸಿ.

Be the first to comment

Leave a Reply

Your email address will not be published.


*