ಮದುವೆಯ ದಿಬ್ಬಣಕ್ಕೆಂದು ಸಾಕ್ಷಾತ್ ಆಕಾಶದಿಂದ ಇಳಿದುಬಂದ ವರ!!

ಕನ್ನಡದ ಕಂಪು ಹರಡಿ..

ಭಾರತೀಯ ಹುಡುಗ ತನ್ನ ಮದುವೆಯನ್ನು ಮೆಕ್ಸಿಕೊದಲ್ಲಿ ಯೋಜಿಸಿದ್ದ. ಮದುವೆಯ ದಿಬ್ಬಣದಲ್ಲಿ ವರ ಸಾಮಾನ್ಯರಂತೆ ಎಲ್ಲರ ಜೊತೆ ಬರದೇ ವಿಶೇಷ ಎಂಟ್ರಿ ಕೊಟ್ಟಿದ್ದಾನೆ. ಆಕಾಶ್ ಯಾದವ್ ಎಂಬ ನಾಮಧೇಯದ ಈತ ಹೆಸರಿಗೆ ತಕ್ಕಂತೆ ಸಾಕ್ಷಾತ್ ಆಕಾಶದಿಂದ ಇಳಿದು ಬಂದಿದ್ದಾನೆ!. ಏನಿದು ಸುದ್ದಿ ಅಂತೀರಾ ಬನ್ನಿ ಇಲ್ಲಿದೆ ಡೀಟೇಲ್ಸ್..

ಗಗನ್ ಪ್ರೀತ್ ಹೆಸರಿನ ತನ್ನ ಹುಡುಗಿಯನ್ನು ಕೈ ಹಿಡಿಯಲು ಮೆಕ್ಸಿಕೊದ ಲಾಸ್ ಕ್ಯಾಬೊಸ್‌ನ ಬೀಚ್ ಸ್ಥಳದಲ್ಲಿ ದುಬಾರಿ ಅಲಂಕಾರದೊಂದಿಗೆ ಮದುವೆಗಾಗಿ ಸಿಂಗರಿಸಲಾಗಿತ್ತು.
ಆದರೆ ವರನೇ ನಾಪತ್ತೆ!.

ನಂತರ ಕೆಲವೇ ಸಮಯದಲ್ಲಿ, ಆಕಾಶದಿಂದ ಸ್ಕೈ ಡೈವ್ ಮಾಡಿ ಭೂಮಿಗೆ ಇಳಿದುಬಂದಾಗ ಎಲ್ಲರಿಗೂ ಆಶ್ಚರ್ಯ ಹಾಗು ಆನಂದ.. ಮೂಲತಃ ನಟರಾದ ಆಕಾಶ್ ವೃತ್ತಿಪರ ನರ್ತಕಿ ಹಾಗು ಸೂಪರ್ ಮಾಡೆಲ್ ಗಗನ್ ಪ್ರೀತ್ ರನ್ನು ಕೈ ಹಿಡಿಯಲಿದ್ದಾರೆ. ಅವರ ವಿನೂತನ ದಿಬ್ಬಣದ ಎಂಟ್ರಿ ವಿಡಿಯೋ ಇಲ್ಲಿದೆ ನೋಡಿ..

Be the first to comment

Leave a Reply

Your email address will not be published.


*