ಮಕ್ಕಳಾಗ್ತಿಲ್ಲ ಅನ್ನೋ ಚಿಂತೆ ಹಗಲಿರುಳು ಕಾಡ್ತಾ ಇದೀಯಾ? ದೈವಾನುಗ್ರಹದಿಂದ ನಿಮ್ಮ ಕಷ್ಟ ಪರಿಹರಿಸಿಕೊಳ್ಳಿ..

ಕನ್ನಡದ ಕಂಪು ಹರಡಿ..

ಮದುವೆಯಾಗಿ ಕೆಲವು ವರ್ಷಗಳೇ ಆಯ್ತು ಇನ್ನು ಮಕ್ಕಳಾಗಿಲ್ಲ. ಗಂಡ ಸ್ಮೋಕಿಂಗ್ ಮಾಡ್ತಾರೆ ಮಕ್ಕಳಾಗೋ ಸಂಭವ ಕಡಿಮೆ. PCOD ಸಮಸ್ಯೆ, ಹಣದ ಸಮಸ್ಯೆ, ಹೀಗೆ ಹಲವಾರು ಕಾರಣಗಳನ್ನ ಕೊಟ್ಟು ಮಕ್ಕಳಾಗ್ತಿಲ್ಲಾ ಅಂತ ಗೋಳಾಡೋ ದಂಪತಿಗಳನ್ನ ಇತ್ತೀಚಿಗೆ ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ಆರೋಗ್ಯ ಸಮಸ್ಯೆಗಳಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಅಂದರೆ ಬಹಳವೇ ದುಬಾರಿ. ಇನ್ನು ಐವಿಎಫ್ ಮತ್ತು ಟೆಸ್ಟ್ ಟ್ಯೂಬ್ ಬೇಬಿ ಇನ್ನು ಹಲವು ದಾರಿಗಳನ್ನೂ ಹುಡುಕುವ ದಂಪತಿಗಳಿಗೇನೂ ಕಡಿಮೆಯಿಲ್ಲ.

ಆಧುನಿಕ ಜೀವನಶೈಲಿಯ ಒತ್ತಡದ ಜೀವನವನ್ನು ಅನುಭವಿಸುವ ಗಂಡ-ಹೆಂಡತಿಗೆ ಒಟ್ಟಾಗಿ ಸಮಯ ಕಳೆಯಲು ಆಗದಿರುವುದರಿಂದ ಇತ್ತೀಚಿನ ದಿನಗಳಲ್ಲಿ ಸಂತಾನಹೀನತೆ ತುಂಬಾ ಜನರಲ್ಲಿ ಹೆಚ್ಚಾಗಿ ಕಾಡುತ್ತದೆ. ಈ ತರಹದ ಸಮಸ್ಯೆಗೆ ಜೋತಿಷ್ಯ ಶಾಸ್ತ್ರದ ಪ್ರಕಾರ ನಾನ ಕಾರಣಗಳಿವೆ. ಹಾಗೆಯೇ ಒಂದು ಪರಿಹಾರ ಕೂಡ ಇದೆ. ಯಾವುದೇ ರೀತಿಯ ಹಣ ಖರ್ಚು ಇಲ್ಲದೆ ದೇವರಲ್ಲಿ ಭಕ್ತಿಯಿಟ್ಟು ಈ ಕೆಳಗಿನ ಮಂತ್ರಗಳನ್ನು ಜಪಿಸಿದರೆ ವಿವಾಹಾಪೇಕ್ಷಿಗಳಿಗೆ ವಿವಾಹ ಭಾಗ್ಯ ಒಲಿದು ಒಂದು ಉತ್ತಮ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.ಇದರಲ್ಲಿ ಒಂದು ಸಂತಾನ ಗೋಪಾಲ ಮಂತ್ರ : “ಓಂ ಶ್ರೀಮ್ ಹ್ರೀಂ ಕ್ಲೀಂ ಗ್ಲೌಮ್ ದೇವಕೀಸುತ ಗೋವಿಂದ ವಾಸುದೇವ ಜಗತ್ಪತೇ ದೇಹಿಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ” ಅಥವಾ “ಓಂ ಕ್ಲೀಮ್ ಗೋಪಾಲವೇಷಧಾರಾಯ ವಾಸುದೇವಾಯ ಹುಂ ಫಟ್ ಸ್ವಾಹಾ”
ಇದಲ್ಲದೆ ಸಂತಾನ ಪ್ರಾಪ್ತಿ ಮಂತ್ರ ಎಂತಲೇ ಒಂದು ಮಂತ್ರವಿದೆ. ಅದು ಹೀಗಿದೆ “ಓಂ ನಮೋ ಭಗವತೇ ಜಗತ್ಪ್ರಸೂತಯೇ ನಮಃ” ಇದನ್ನು ೧೦೮ ಬಾರಿ ಪ್ರತಿನಿತ್ಯ ಜಪಿಸಬೇಕು ಎಂದು ಹೇಳಲಾಗಿದೆ.

ಇದಲ್ಲದೆ ಇನ್ನೂ ಒಂದು ಮುಖ್ಯವಾದ ಮಂತ್ರವನ್ನು ಪುರಾಣಗಳಲ್ಲಿ ಕಾಣಬಹುದು. ಅದು ಹೀಗಿದೆ. “ದೇವದೇವಾ ಜಗನ್ನಾಥ ಗೌತ್ರ ವೃದ್ಧಿ ಕಾರಕ ಪ್ರಭೋ ದೇಹಿಮೆ ತನಯಂ ಶೀಘ್ರಂ ಆಯುಷ್ಮಾಧಾಮ್ ಯಶಶ್ರೀನಂ” ಇನ್ನು ಸ್ವಯಂವರ ಪಾರ್ವತಿ ಮಂತ್ರ. ಈ ಮಂತ್ರ ಜಪಿಸಿದರೆ ವಿವಾಹಾಪೇಕ್ಷಿಗಳಿಗೆ ವಿವಾಹ ಭಾಗ್ಯ ಒಲಿದು ಒಂದು ಉತ್ತಮ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.”ಓಂ ಹ್ರೀಂ ಯೋಗಿನೀಂ ಯೋಗೇಶ್ವರಿ ಯೋಗ ಭಯಂಕರೀ ಸಕಲ ಸ್ಥಾವರ ಜಂಗಮಸ್ಯ ಮುಖ ಹೃದಯಂ ಮಾಂ ವಸಂ ಆಕರ್ಷ ಆಕರ್ಷಯ ನಮಃ”
ಗ್ರಹಚಾರಗಳಿಂದ ಸಂತಾನಭಾಗ್ಯಕ್ಕೆ ತಡೆಯಾಗಿದ್ದರೆ, ಗ್ರಹಾಧಿಪತಿಗಳ ಅಥವಾ ರಾಶ್ಯಾಧಿಪತಿಯ ಪೂಜೆ, ಆರಾಧನೆ ಮಾಡಿದರೆ ಉತ್ತಮ. ಆಧ್ಯಾತ್ಮಿಕ ವಿಚಾರಗಳನ್ನು ನಂಬುವವರು ಈ ವಿಧಾನಗಳನ್ನು ಅನುಸರಿಸಿ ಫಲ ಪಡೆಯಬಹುದು.

Be the first to comment

Leave a Reply

Your email address will not be published.


*