ಆಲ್ಕೋಹಾಲ್, ಸೋಪ್, ಸ್ಯಾನಿಟೈಜರ್.. ಇದರಲ್ಲಿ ಕರೋನಾಗೆ ಯಾವುದು ವೈಜ್ಞಾನಿಕವಾಗಿ ಹೆಚ್ಚು ಪರಿಣಾಮಕಾರಿ ಗೊತ್ತಾ?

ಕನ್ನಡದ ಕಂಪು ಹರಡಿ..

ಕರೋನಾ ವೈರಸ್ ಜಾಗತಿಕ ಸೋಂಕು ಅಂತ ವಿಶ್ವ ಆರೋಗ್ಯ ಸಂಸ್ಥೆ ಇಂದು ಪ್ರಕಟಿಸಿದೆ. ಇದುವರೆಗೂ ಇದಕ್ಕೆ ಔಷಧವನ್ನು ಕಂಡುಹಿಡಿಯುವುದಕ್ಕೆ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದುವರೆಗೆ ಕೆಲವೇ ವೈರಸ್ ಗೆ ಮಾತ್ರ ಪರಿಣಾಮಕಾರಿ ಔಷಧ ಕಂಡುಹಿಡಿಯಲಾಗಿದೆ. ಇದಕ್ಕೆ ಮುಖ್ಯ ಕಾರಣ ವೈರಸ್ ಎಂಬುದೊಂದು ಜೀವಿಯೇ ಅಲ್ಲ, ಅದು ಕೇವಲ ಕೆಲವು ಜೀನ್ಸ್ ಹಾಗು ಪ್ರೊಟೀನ್ ಲಿಪಿಡ್ ಗಳ ರಚನೆಯಷ್ಟೇ. ಆದರೆ ಇವು ಜೀವಿಗಳ ಒಳಹೊಕ್ಕಾಗ ಸಜೀವವಾಗಿ ವರ್ತಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಇನ್ನು ಜನರನ್ನ ಭಯಭೀತರನ್ನಾಗಿಸಿರುವ ಯಮಸ್ವರೂಪಿ ಕರೋನವೈರಸ್ ಗೆ ಕೇವಲ ಮುಂಜಾಗ್ರತೆಗಳಷ್ಟೇ ಕೆಲಸ ಮಾಡುತ್ತದೆ. ಇದಕ್ಕಾಗಿಯೇ ಎಲ್ಲೆಡೆ ಆದಷ್ಟು ವೈಯಕ್ತಿಕ ಸ್ವಚ್ಛತೆಯ ಕೂಗು ಕೇಳಿಬರುತ್ತಿದೆ. ಆಲ್ಕೋಹಾಲ್, ಸೋಪ್, ಸ್ಯಾನಿಟೈಜರ್ ಮುಂತಾದವನ್ನು ಆಗಾಗ್ಗೆ ಬಳಸಿ ಎಂದು ಹೇಳುತ್ತಿದ್ದಾರೆ. ಆದರೆ ನಿಜವಾಗಿಯೂ ಇವುಗಳಲ್ಲಿ ಯಾವುದು ಅತ್ಯಂತ ಪರಿಣಾಮಕಾರಿ ಗೊತ್ತಾ? ಬನ್ನಿ ನಾವಿಲ್ಲಿ ನಿಮಗಾಗಿ ಈ ವೈಜ್ಞಾನಿಕ ಲೇಖನವನ್ನು ತಂದಿದ್ದೇವೆ.
ಇದಕ್ಕಾಗಿ ನಾವು ಮೊದಲು ಈ ವೈರಸ್ ಬಗ್ಗೆ ತಿಳಿದುಕೊಳ್ಳಬೇಕು.

ಕರೋನಾ ವೈರಸ್ ರಚನೆಯಲ್ಲಿ ಹೀಗೆ ಕಾಣುತ್ತದೆ. ಇಲ್ಲಿ ನೀವು ನೋಡುವ ಹಾಗೆ ಈ ವೈರಸ್ ನ ಹೊರಪದರ ಹಲವಾರು ಪ್ರೊಟೀನ್ ಗಳು ಹಾಗು ದ್ವಿಪದರದ ಲಿಪಿಡ್ (ಕೊಬ್ಬು ಅಥವಾ ಮೇದಸ್ಸಿನ ಅಂಶ)ನಿಂದಾಗಿ. ಈ ವೈರಸ್ ಗಳು ಇಷ್ಟು ಸರಳವಾಗಿದ್ದರೂ ಮಾರಣಾಂತಿಕವಾಗಿವೆ. ದೇಹದ ಹೊರಗೆ ದಿನಗಳವರೆಗೆ ಜೀವಿಸಬಲ್ಲವು!
ಈಗ ಆಲ್ಕೋಹಾಲ್, ಸೋಪ್, ಸ್ಯಾನಿಟೈಜರ್ ಇವುಗಳಲ್ಲಿ ಹೆಚ್ಚಿನ ಪರಿಣಾಮ ಯಾವುದು ಉಂಟುಮಾಡುತ್ತದೆ ಎಂದು ತಿಳಿದುಕೊಳ್ಳೋಣ. ಈಗ ತಿಳಿದುಕೊಂಡಂತೆ ಈ ವೈರಸ್ ನ ಭಿತ್ತಿಯಲ್ಲಿ ದ್ವಿಪದರದ ಲಿಪಿಡ್ ಇರುತ್ತದೆ. ಇದನ್ನೇ ನಾವು ಗುರಿಯಾಗಿಸಿಕೊಂಡಿರುವುದು. ಸಾಮಾನ್ಯ ಸೋಪು ಅಥವಾ ಮಾರ್ಜಕಗಳು ಈ ಕೊಬ್ಬಿನ ಪೊರೆಯನ್ನು ಕರಗಿಸುತ್ತದೆ. ಇದರಿಂದ ವೈರಸ್ ನಿರ್ಜೀವ ಅಥವಾ ನಿಷ್ಕ್ರಿಯವಾಗುತ್ತದೆ!!

ಸೋಂಕುನಿವಾರಕಗಳು ಅಥವಾ ಆಲ್ಕೋಹಾಲ್, ಸ್ಯಾನಿಟೈಜರ್ ದ್ರವಗಳು ಇದೇ ರೀತಿಯ ಪರಿಣಾಮಗಳನ್ನು ಬೀರುತ್ತವೆ ಆದರೆ ಸಾಮಾನ್ಯ ಸೋಪಿಗಿಂತ ಉತ್ತಮವಾಗಿರುವುದಿಲ್ಲ. ಆಲ್ಕೋಹಾಲ್ ಮತ್ತು ಸಾಬೂನು ಹೊರತುಪಡಿಸಿ, ಈ ಉತ್ಪನ್ನಗಳಲ್ಲಿನ “ಆಂಟಿಬ್ಯಾಕ್ಟೀರಿಯಲ್ ಏಜೆಂಟ್” ಗಳು ವೈರಸ್ ರಚನೆಯ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಪ್ರಯೋಗಗಳಿಂದ ತಿಳಿದುಬಂದಿರುವ ಪ್ರಕಾರ ಸಾಬೂನು ಅತ್ಯಂತ ಪರಿಣಾಮಕಾರಿ ಇದರ ನಂತರದ ಸ್ಥಾನ ಆಲ್ಕೋಹಾಲ್ ಗೆ. ಆಲ್ಕೋಹಾಲ್ ಇದೆ ರೀತಿಯ ಪರಿಣಾಮ ಬೀರಬೇಕೆಂದರೆ ಅದು ಹೆಚ್ಚಿನ ಸಾಂದ್ರತೆಯಾಗಿರಬೇಕು ಅಂದರೆ ಬಹುಶಃ + 60%. ಸಾಮಾನ್ಯ ವೋಡ್ಕಾ ಅಥವಾ ವಿಸ್ಕಿಯಳ್ಳಿ ಇದು 40% ಎಥೆನಾಲ್ ಇರುತ್ತದೆ. ಇದು ವೈರಸ್ ಮೇಲೆ ಏನೂ ಪರಿಣಾಮ ಉಂಟುಮಾಡುವುದಿಲ್ಲ.

ಇನ್ನು ನಿಮ್ಮ ಕೈಗಳ ಮೇಲ್ಮೈ ಒರಟಾಗಿರುವುದರಿಂದ ಸೋಪು ಹಾಕಿದ ನಂತರ ಉಜ್ಜುವುದು ಅವಶ್ಯಕ. ಹಾಗೆಯೇ ಕೆಮ್ಮಿದಾಗ ಅಥವಾ ಸೀನಿದಾಗ ಈ ವೈರಸ್ ಗಳು ನೀರಿನ ಹನಿಗಳೊಂದಿಗೆ ಸೇರಿ ಬೇರೆ ದೇಹವನ್ನು ಪ್ರವೇಶಿಸುತ್ತದೆ. ಈ ವೈರಸ್ ಬೇರೆ ವೈರಸ್ ಗಳಿಗೆ ಹೋಲಿಸಿದರೆ ಭಾರವಾದ್ದರಿಂದ ಇವು ಸುಮಾರು 2ಮಿ ನಷ್ಟು ದೂರ ಸಾಗಬಲ್ಲವು. ಹಾಗಾಗಿ ಕೆಮ್ಮುವಾಗ ಸೀನುವಾಗ ಒಂದು ಬಟ್ಟೆ ಅಥವಾ ಮಾಸ್ಕ್ ಧರಿಸಿ. ಬೇರೆಯರೊಂದಿಗೆ ಸುಮಾರು 1ಮಿ ದೂರವಿರಿ.
ಈ ಮೇಲಿನ ಅಂಕಣ ನಿಮ್ಮ ಹಾಗು ನಿಮ್ಮವರ ಆರೋಗ್ಯದ ಕಾಳಜಿಗಾಗಿ. ಇದನ್ನು ಆದಷ್ಟು ಶೇರ್ ಮಾಡಿ ಎಲ್ಲರಲ್ಲಿ ಜಾಗೃತಿ ಮೂಡಿಸಿ.

Be the first to comment

Leave a Reply

Your email address will not be published.


*