ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ಅನಿರೀಕ್ಷಿತ ತಿರುವು.. ಅಚಾನಕ್ ಆಗಿ ಆಗೆಹೋಯ್ತು ಮುತ್ತು ಮದುವೆ!!

ಕನ್ನಡದ ಕಂಪು ಹರಡಿ..

ಯಾರೇ ನೀ ಮೋಹಿನಿ ಧಾರಾವಾಹಿಯ ಮುಖ್ಯ ಪಾತ್ರಧಾರಿ ಮುತ್ತು ಬೆಳ್ಳಿ ಹಾಗು ಮಾಯಾ. ಇವರ ಸುತ್ತ ಸುತ್ತುತ್ತಾ ಇದ್ದ ಮದುವೆ ವಿಚಾರ ಕೊನೆಗೂ ಬಗೆಹರಿದಿದೆ. ಇದು ಚಾಮುಂಡಿ ತಾಯಿ ಮೇಲೆ ಆಣೆಯಾಗಲೂ ಸತ್ಯ ಅಂತಿದ್ದಾಳೆ ಬೆಳ್ಳಿ!

ಕೃಪೆ : ಜೀ ವಾಹಿನಿ
ಹೌದು ಧಾರಾವಾಹಿಯ ಮೊದಲಿನಿಂದಲೂ ಮುತ್ತು ಮಾವನ ಮೊದಲ ಹೆಂಡತಿ ಚಿತ್ರಾ ಜಾಗ ತುಂಬಲು ಬೆಳ್ಳಿ ಹಾಗು ಮಾಯಾ ನಡುವೆ ಅನೇಕ ಜಟಾಪಟಿಗಳೇ ಆಗಿಹೋಗಿವೆ. ಚಿತ್ರಾ ಷಣ್ಮುಗ ಹಾಗು ಮುತ್ತು ಮಾವನ ತಂಗಿ, ಬೆಳ್ಳಿಯನ್ನೇ ಮನೆಯ ಸೊಸೆಯಾಗಿ ಮಾಡಬೇಕೆಂದು ಪಟ್ಟು ಹಿಡಿದಿದ್ದರೆ ಅದಕ್ಕೆ ವಿರೋಧಿಗಳಾಗಿ ಮನೆಯವರೆಲ್ಲಾ ಇದ್ದಾರೆ. ಅಮ್ಮ ನೀಲಾಂಬರಿ, ತಮ್ಮ ಭೈರ, ಮಾಯಾ ಹಾಗು ಮತ್ತೆಲ್ಲರೂ ಇದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಮುತ್ತು ಮಾವ ಈ ಸಂದಿಗ್ಧ ಪರಿಸ್ಥಿತಿಗೆ ಸಿಕ್ಕಿ ಅನೇಕ ಬಾರಿ ಗೊಂದಲಕ್ಕೊಳಗಾಗಿದ್ದಾನೆ. ಆದರೆ ಈಗ ಕಟ್ಟಕಡೆಯ ನಿರ್ಧಾರವೆಂಬಂತೆ ಮದುವೆ ಮಾಡಿಕೊಂಡಿದ್ದಾನೆ.

ಕೃಪೆ : ಜೀ ವಾಹಿನಿ
ಈಗ ಮದುಮಗಳ ಸ್ಥಾನದಲ್ಲಿ ಇರೋದು ಮತ್ತಾರೂ ಅಲ್ಲ ಬೆಳ್ಳಿ!. ಹೌದು ಕೆಲವು ನಿಬಂಧನೆಗಳನ್ನು ಹೇಳಿ ಬೆಳ್ಳಿಯ ಬಳಿ ಮಾತು ತೆಗೆದುಕೊಂಡು ಈ ಮದುವೆ ವಿಚಾರ ಯಾರಿಗೂ ಹೇಳಬಾರದೆಂದು ಹೇಳಿ ದೇವರ ಸಾಕ್ಷಿಯಾಗಿ ಮುತ್ತು ಮಾವ ಬೆಳ್ಳಿಯನ್ನು ಮದುವೆಯಾಗಿದ್ದಾರೆ. ಈ ರೋಚಕ ತಿರುವಿಗೆ ಇಂದಿನ ಸಂಚಿಕೆ ಸಾಕ್ಷಿಯಾಗಲಿದೆ.

ಕೃಪೆ : ಜೀ ವಾಹಿನಿ

Be the first to comment

Leave a Reply

Your email address will not be published.


*